Skip to main content

Posts

Showing posts from October, 2017

ಈಗ ಕನ್ನಡ ಯಾಕೆ?

ಬಹಳಷ್ಟು ಸಲ, ನಾವು ನಮ್ಮ ಮನೆ, ಊರು, ರಾಜ್ಯ ಅಥವಾ ದೇಶವನ್ನು ಬಿಟ್ಟು ಹೋಗುವ ತನಕ ನಮ್ಮ ಸಂಸ್ಕೃತಿ ಮತ್ತು ಮೌಲ್ಯಗಳ ಮಹತ್ವ ನಮಗೆ ತಿಳಿದಿರುವುದಿಲ್ಲ. ನನಗೆ ಆಗಿದ್ದೂ ಅದೇ.
ಕಾನೂನಿನ ಪದವಿ ಪಡೆಯುವ ತನಕ ಕರ್ನಾಟಕದಲ್ಲೇ ಇದ್ದಿದ್ದರಿಂದ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅರಿವು ನನಗೆ ಅಷ್ಟು ಇರಲಿಲ್ಲ. ಆಂಗ್ಲ ಭಾಷೆಯ ವ್ಯಾವಹಾರಿಕ ಪ್ರಾಧಾನ್ಯ ಜಗತ್ತಿನಾದ್ಯಂತ ಹೆಚ್ಚಾಗಿದ್ದು, ನಾನು ಆಂಗ್ಲ  ಮಾಧ್ಯಮದಲ್ಲಿ ಶಿಕ್ಷಣ ಪಡೆದಿದ್ದಾಗಿದೆ. ಆದುದರಿಂದ, ನಾನು ಓದಿದ ಶಾಲೆಯಲ್ಲಿ ಕನ್ನಡದಲ್ಲಿ ಮಾತನಾಡುವುದನ್ನು ವಿದ್ಯಾರ್ಥಿಗಳು ಹಾಗೂ ಶಿಕ್ಷಕರೂ ಸಹ ಕೀಳಾಗಿ ನೋಡುತ್ತಿದ್ದರು. ಕಡ್ಡಾಯವಾಗಿ ಆಂಗ್ಲ ಭಾಷೆಯಲ್ಲೇ ಮಾತನಾಡಬೇಕು ಎಂಬ ನಿಯಮ ನನ್ನ ಶಾಲೆಯಲ್ಲಿ ಇತ್ತು.
ಹೀಗಿರುವಾಗ, ನಾನು ಕಾನೂನು ಓದಲು ಶುರು ಮಾಡಿದಾಗ, ಮೊದಲನೇ ಸೆಮಿಸ್ಟರ್ ನಲ್ಲಿ, ಕರ್ನಾಟಕದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಕನ್ನಡ ಕಡ್ಡಾಯವಾದ ವಿಷಯ ಎಂದು ಘೋಷಿಸಲಾಯಿತು. ನಾವು ಯಾರೂ ಸಹ ಈ ನಿಯಮವನ್ನು ತುಂಬು ಹೃದಯದಿಂದ ಸ್ವೀಕರಿಸಿದ್ದಿಲ್ಲ. ಶಿಕ್ಷಣ ವ್ಯವಸ್ಥೆಯ ಮೇಲೆ ತುಂಬಾ ಸಿಟ್ಟು ಬಂದಿತ್ತು. ನಮ್ಮ ಆಯ್ಕೆಯ ಸ್ವಾತಂತ್ರ್ಯಕ್ಕೆ ಈ ನಿಯಮ ಧಕ್ಕೆ ತಂದಿತು ಅಂತ ನಾವೆಲ್ಲಾ ಗೋಗರೆದೆವು. ಆದರೂ ಒಲ್ಲದ ಮನಸ್ಸಿನಿಂದ ಕನ್ನಡವನ್ನು ಓದಲೇಬೇಕಾಯಿತು!
ಸ್ನಾತಕೋತ್ತರ ಪದವಿ ಪಡೆಯಲು ಮುಂಬೈಯ ಟಾಟಾ ಸಾಮಾಜಿಕ ವಿಜ್ಞಾನ ಸಂಸ್ಥೆಯಲ್ಲಿ ನಾನು ಕಾಲಿಟ್ಟಾಗ ನನಗೆ ಭಾಷೆಯ ಪ್ರಾಮುಖ್ಯತೆ ಮೊದಲ…